ಸಾಹಿತ್ಯ ಸಮಾಜದ ಕನ್ನಡಿ

ಪುತ್ತೂರು; ಸಾಹಿತ್ಯ ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳು ಸಾಹಿತ್ಯದಲ್ಲಿ ತುಂಬಿರುವುದು ಮನುಷ್ಯ ಜೀವನದ ಕಥೆ. ಆದುದರಿಂದ ’ಸಾಹಿತ್ಯ ಸಮಾಜದ ಕನ್ನಡಿ’ ಎಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜನ ಕನ್ನಡ ಉಪನ್ಯಾಸಕಿ ಶ್ರಿಮತಿ ಉಷಾಯಶವಂತ್ ಹೇಳಿದರು. ಅವರು ಸಂತ ಫಿಲೋಮಿನಾ ಕಾಲೇಜಿನ ಸಾಹಿತ್ಯ ಸಂಘ ಮತ್ತು ಕನ್ನಡ ವಿಭಾಗದ ಆಶ್ರಯದಲ್ಲಿ ’ಸಾಹಿತ್ಯ ಮತ್ತು ಬದುಕು’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಲಿಯೋ ನೋರೊನ್ಹಾ ಮಾತನಾಡಿ ವಿಧ್ಯಾರ್ಥಿಗಳು ಓದುವ ಮೂಲಕ ಬದುಕು ರೂಪಿಸಿಕೊಳ್ಳಬೇಕು ಎಂದರು ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ವಿಜಯಕುಮಾರ್ ಮೊಳೆಯಾರ್ ಉಪಸ್ಥಿತರಿದ್ದರು.
ಸಾಹಿತ್ಯ ಸಂಘದ ನಿರ್ದೇಶಕರಾದ ಶ್ರಿ ಬಸ್ತಿಯಂ ಪಾಯಸ್ ಸ್ವಾಗತಿದರು. ಕು.ಅರ್ಚನಾ ವಂದಿಸಿದರು. ಸಿಸ್ಟರ್ ಮಾರ್ತಾ ಕಾರ್ಯಕ್ರಮ ನಿರ್ವಹಿಸಿದರು.

×