ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಭೌತಶಾಸ್ತ್ರ ಸಂಘದ ಉದ್ಘಾಟನೆ

“ಭೌತಶಾಸ್ತ್ರ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳು, ಹೊಸ ಆವಿಷ್ಕಾರಗಳು ಮತ್ತು ಪ್ರಯೋಗ ಚಟುವಟಿಕೆಗಳಿಗ ಆಸ್ಪದ ನೀಡುವ ವೇದಿಕೆ ಕಾಲೇಜುಗಳಲ್ಲಿ ಅಗತ್ಯ. ಇಂಥ ವೇದಿಕಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಇನ್ನಷ್ಟು ಆಸಕ್ತಿಯನ್ನು ಮೂಡಿಸುತ್ತವೆ” ಎಂದು ನಿವೃತ್ತ  ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಸುರೇಶ್ ರಾವ್ ಹೇಳಿದರು. ಅವರು ಇತ್ತೀಚೆಗೆ ಸಂತಫಿಲೋಮಿನಾ ಕಾಲೇಜನ ಸಂತಫಿಲೋಮಿನಾ ಭೌತಶಾಸ್ತ್ರ ಸ್ನಾತಕೋತ್ತರ ಕೇಂದ್ರದಲ್ಲಿ ಫಿಸಿಕ್ಸ್ ಫೋರಮ್ ಉದ್ಘಾಟನೆ ಮಾಡುತ್ತಿದ್ದರು. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ರೆ.ಫಾ.ಎಂಟೋನೀ ಪ್ರಕಾಶ್ ಮಂತೆರೋ, ಮತ್ತು ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎ.ಪಿ.ರಾಧಾಕೃಷ್ಣ ಶುಭ ಹಾರೈಸಿದರು. ಪ್ರಾಂಶುಪಾಲ ಪ್ರೊ.ಲಿಯೋ ನೊರೊನ್ಹಾ ಅವರು ಅಧ್ಯಕ್ಷತೆ ವಹಿಸಿದರು. ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕ ಡಾ.ದೀಪಕ್ ಡಿಸಿಲ್ವ ಅವರು ಸಂಘದ ನಿಯಮಾವಳಿ ಮತ್ತು ಕಾರ್ಯ ಚಟುವಟಿಕೆಗಳ ಬಗೆಗೆ ಪ್ರಾಸ್ತಾವನೆ ನೀಡಿದರು. ಸಂಘದ ಅಧ್ಯಕ್ಷ  ದ್ವಿತೀಯ ಎಂಎಸ್ಸಿ  ವಿದ್ಯಾರ್ಥಿ ರೋಹಿತ್ ಸ್ವಾಗತಿಸಿದರು ಮತ್ತು ಕಾರ್ಯದರ್ಶಿ ಪ್ರದೀಪ್ ವಂದಿಸಿದರು.

×
Social Media Auto Publish Powered By : XYZScripts.com